ಖಾಸಗಿ ಶಾಲೆ ನಡೆಸುವವರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಬೇಕು: ಸಿಎಂ ಡಿ.ಕೆ. ಶಿವಕುಮಾರ್

ಚಿತ್ರದುರ್ಗ: ಖಾಸಗಿ ಶಾಲೆ ನಡೆಸುವವರು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗದ ಶಾಲೆಗಳು ಬೆಂಗಳೂರು ಮಟ್ಟಕ್ಕೆ ಬೆಳೆಯಬೇಕೆಂಬ ಉದ್ದೇಶವಿದೆ. ಹಿಂದೆ ನನ್ನ ಮತ್ತು ಖಾಸಗಿ ಶಾಲೆ ನಡೆಸುವವರ ನಡುವೆ ಒಪ್ಪಂದ ಆಗಿತ್ತು ಎಂದರು.
ಖಾಸಗಿ ಶಾಲೆಗಳು ದತ್ತು ತೆಗೆದುಕೊಳ್ಳಲು ಮಿತಿ ಇದೆ. ದೊಡ್ಡ ಖಾಸಗಿ ಶಾಲೆ ನಡೆಸುವವರು ಉದ್ಯಮಿಗಳಾಗಿರುತ್ತಾರೆ, ಅವರಿಗೆ ಹೇಳಿದ್ದೇನೆ, ಸಿಎಸ್ಆರ್ ಪಾಲಿಸಿಯಂತೆ ಅವರು ಹಣ ಖರ್ಚು ಮಾಡಲಿ. ಸರ್ಕಾರದಲ್ಲಿ 50 ಸಾವಿರ ಶಿಕ್ಷಕರಿದ್ದರೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿಲ್ಲ ಎಂದು ಹೇಳಿದರು
