August 16, 2026

ಜೋಗ ಜಲಪಾತ ದೃಶ್ಯ ವೈಭವ: ರಾಜ, ರಾಣಿ, ರೋರರ್, ​ರಾಕೆಟ್​ ಘರ್ಜನೆಗೆ ಪ್ರವಾಸಿಗರು ಫಿದಾ

0

ಕರ್ನಾಟಕ

karnataka

Language Menu

English

हिंदी

उत्तर प्रदेशउत्तराखंडछत्तीसगढ़झारखंडदिल्लीबिहारमध्य प्रदेशराजस्थानहरियाणाहिमाचल प्रदेश

অসমীয়া

বাংলা

ગુજરાતી

ಕನ್ನಡ

മലയാളം

मराठी

ଓଡିଆ

ਪੰਜਾਬੀ

தமிழ்

తెలుగు

ఆంధ్రప్రదేశ్తెలంగాణ

اردو

ETV Bharat / state

ಜೋಗ ಜಲಪಾತ ದೃಶ್ಯ ವೈಭವ: ರಾಜ, ರಾಣಿ, ರೋರರ್, ​ರಾಕೆಟ್​ ಘರ್ಜನೆಗೆ ಪ್ರವಾಸಿಗರು ಫಿದಾ

https://692f0daefafd02866c133d3da2766e3c.safeframe.googlesyndication.com/safeframe/1-0-45/html/container.html

ಸಾಮಾನ್ಯ ದಿನಗಳಿಗಿಂತ ಈಗ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ಜೋಗ ಜಲಪಾತದ ಅಂದವನ್ನು ಕಣ್ತುಂಬಿಕೊಳ್ಳಲು ಭೇಟಿ‌ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ.

Tourists admiring the scenic beauty of Jog Falls

ಜೋಗ ಜಲಪಾತ ದೃಶ್ಯ ವೈಭವ ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರು (ETV Bharat)

author img

By ETV Bharat Karnataka Team

Published : July 27, 2026 at 8:31 AM IST

2 Min Read

Choose ETV Bharat

ಶಿವಮೊಗ್ಗ: ಮಳೆಗಾಲದಲ್ಲಿ ಜೋಗ ಜಲಪಾತವನ್ನು ನೋಡುವುದೇ ಕಣ್ಣಿಗೆ ಹಬ್ಬ. ಅತಿಯಾದ ಮಳೆಯಿಂದ ಧುಮ್ಮಿಕ್ಕಿ ಹರಿಯುತ್ತಿರುವ ಜಲಪಾತವನ್ನು ಕಣ್ತುಂಬಿಕೊಳ್ಳಲು ಭಾನುವಾರ ಪ್ರವಾಸಿಗರ ದಂಡೇ ಆಗಮಿಸಿತ್ತು.

ರಾಜ್ಯದ ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳತ್ತ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಅದರಂತೆ, ವಿಶ್ವವಿಖ್ಯಾತ ಜೋಗ ಜಲಪಾತಕ್ಕೂ ಸಾವಿರಾರು ಸಂಖ್ಯೆಯಲ್ಲಿ ವೀಕ್ಷಕರು ಭೇಟಿ ನೀಡುತ್ತಿದ್ದಾರೆ.

ಸಾಮಾನ್ಯ ದಿನಗಳಿಗಿಂತ ಈಗ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ಜೋಗ ಜಲಪಾತದ ಅಂದವನ್ನು ಕಣ್ತುಂಬಿಕೊಳ್ಳಲು ಭೇಟಿ‌ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಇದರಿಂದ ಜೋಗದಲ್ಲಿ ವಾಹನ ಪಾರ್ಕಿಂಗ್, ಸಂಚಾರ ಹಾಗೂ ಮೂಲಭೂತ ಸೌಲಭ್ಯಗಳ ಮೇಲೆ ಒತ್ತಡ ಉಂಟಾಗಿದೆ. ಪ್ರವಾಸೋದ್ಯಮಕ್ಕೆ ಇದರಿಂದ ಚೈತನ್ಯ ದೊರೆತಿದ್ದರೂ, ಜನಸಂದಣಿ ನಿಯಂತ್ರಣ, ಸ್ವಚ್ಛತೆ ಮತ್ತು ಸುರಕ್ಷತೆ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ ಎನ್ನುತ್ತಿದ್ದಾರೆ ಪ್ರವಾಸಿಗರು.

ಜೋಗ ಜಲಪಾತದಲ್ಲಿ ಮೂಲಸೌಕರ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವ ಹಿನ್ನೆಲೆಯಲ್ಲಿ, ಕಾಮಗಾರಿ ನಡೆಯುತ್ತಿದೆ. ಹೀಗಾಗಿ, ಪ್ರವಾಸಿಗರಿಗೆ ವಾಹನ ಪಾರ್ಕಿಂಗ್ ಸೇರಿದಂತೆ, ಮೂಲಸೌಕರ್ಯದಲ್ಲಿ ಕೊಂಚ ಏರುಪೇರಾಗಿದೆ‌. ಆದರೂ, ರಜೆಯ ಮಜಾಕ್ಕಾಗಿ ಪ್ರವಾಸಿಗರು ಹೆಚ್ಚು ಆಗಮಿಸುತ್ತಿದ್ದಾರೆ.

ಜೋಗ ಜಲಪಾತದ ಬಳಿ ಪ್ರವೇಶದ್ವಾರ, ವೀಕ್ಷಣ ಗೋಪುರ, ದೊಡ್ಡ ಪಾರ್ಕಿಂಗ್, ಉದ್ಯಾನವನ, ಕಾರಂಜಿ ಜೊತೆಗೆ ಜೋಗದ ಸಮಗ್ರ ಮಾಹಿತಿಯುಳ್ಳ ಫಲಕದ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿ ವಿಳಂಬವಾಗಿ ನಡೆಯುತ್ತಿದೆ. ಆದರೂ ಪ್ರವಾಸಿಗರಿಗೆ ಯಾವುದೇ ತೊಂದರೆ ಆಗದಂತೆ ಜೋಗ ಅಭಿವೃದ್ದಿ ಪ್ರಾಧಿಕಾರ ಕ್ರಮ ತೆಗೆದುಕೊಂಡಿದೆ. ಭಾನುವಾರ ಜೋಗಕ್ಕೆ ನಾಡಿನಾದ್ಯಂತದಿಂದ ಪ್ರವಾಸಿಗರು ತಮ್ಮ ಕುಟುಂಬ, ಸ್ನೇಹಿತರೂಂದಿಗೆ ಆಗಮಿಸಿ ಜೋಗದ ಮಜಾ ಸವಿದರು.

Leave a Reply

Your email address will not be published. Required fields are marked *