ರೈತರಿಗೆ ಕೃಷಿ ಚಟುವಟಿಕೆ ಮಾಡಲು ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹ

ಬನ್ನೂರು ಹೋಬಳಿಗೆ ಆಗಮಿಸಿದ ಮಾಜಿ ಸಚಿವರು ಹಾಲಿ ಶಾಸಕರು ಆದ ಎಚ್ ಸಿ ಮಾದೇವಪ್ಪ ಅವರನ್ನು ಮಾರ್ಗ ಮಧ್ಯದಲ್ಲಿ ಭೇಟಿ ಮಾಡಿ ರೈತರ ಸಮಸ್ಯೆಗಳ ಕುರಿತು ಬನ್ನೂರು ನಾರಾಯಣ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಜನ ರೈತರು ಮಾದೇವಪ್ಪ ಅವರಿಗೆ ಚರ್ಚಿಸಿ ಮನವಿ ಸಲ್ಲಿಸಿದ ಸಲ್ಲಿಸಿದರು

ಹಾಗೂ ಅದೇ ಮಾರ್ಗ ಮಧ್ಯದಲ್ಲಿ ಚಾಮರಾಜನಗರ ಕ್ಷೇತ್ರದ ಸಂಸದರು ಆದಂತ ಸುನಿಲ್ ಬೋಸ್ ರವರ ಗಮನಕ್ಕೂ ಸಹ ಈ ಭಾಗದ ರೈತರ ಸಮಸ್ಯೆ ಬೆಳೆ ಬೆಳೆಯಲು ನಾಲೆಗಳ ಮುಖಾಂತರ ವಿಳಂಬ ಧೋರಣೆಯನ್ನು ಖಂಡಿಸಿ ಸಂಸದರಾದ ಸುನಿಲ್ ಬೋಸ್ ಅವರಿಗೆ ರೈತರ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಲಾಯಿತು ಸಂದರ್ಭದಲ್ಲಿ ರೈತ ಮುಖಂಡರುಗಳಾದ ಮೇಗಳಕೊಪ್ಪಲ್ ರಂಗಸ್ವಾಮಿ ಹುನಗನಹಳ್ಳಿ ವಿಶ್ವನಾಥ್ ದೇವನಹಳ್ಳಿ ಮಹಾದೇವ ನಾಗರಾಜು ಪರಮೇಶಿ ಶಿವಸ್ವಾಮಿ ಮಹೇಶ್ ಇನ್ನು ಅನೇಕ ಜನ ರೈತ ಮುಖಂಡರು ಭಾಗವಹಿಸಿ ಆಗ್ರಹಿಸಿ ಮನವಿ ನೀಡಿದರು
