October 30, 2026

*ಕಾಂಗ್ರೆಸ್ ಪಕ್ಷ ತೊರೆದು ಜೆಡಿ ಎಸ್ ಸೇರ್ಪಡೆ*

0

ಕೆ.ಆರ್.ಪೇಟೆ, ತಾಲೂಕಿನ ಬೂಕನಕೆರೆ ಹೋಬಳಿಯ ಬಲ್ಲೇನಹಳ್ಳಿ ಗ್ರಾಮದ ಹಲವು ಕಾಂಗ್ರೆಸ್ ಮುಖಂಡರು ಆ ಪಕ್ಷವನ್ನು ತೊರೆದು ಶಾಸಕ ಹೆಚ್.ಟಿ.ಮಂಜು ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಕಳೆದ ಮೂರುವರೆ ವರ್ಷಗಳ ಅವಧಿಯಲ್ಲಿ ತಮ್ಮ ಗ್ರಾಮಕ್ಕೆ ಹಾಗೂ ಬೂಕನಕೆರೆ ಹೋಬಳಿಗೆ ಶಾಸಕರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದ ಬಲ್ಲೇನಹಳ್ಳಿ ಗ್ರಾಮದ ವ್ಯವಸಾಯೋತ್ಪನ್ನ ಸಹಕಾರ ಸಂಘದ ನಿರ್ದೇಶಕರು ಹಾಗೂ ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು ಹಾಗೂ ಗ್ರಾಮದ ಮುಖಂಡರು ಪಟ್ಟಣದ ಜೆಡಿಎಸ್ ಕಚೇರಿಗೆ ಆಗಮಿಸಿ ಶಾಸಕ ಮಂಜುರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಶಾಲು ಹಾರ ಹಾಕಿಸಿಕೊಳ್ಳುವ ಮೂಲಕ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಗೊಂಡರು.ಕಾಂಗ್ರೆಸ್ ಮುಖಂಡರಾಗಿದ್ದ ಬಿ.ಕೆ.ಕುಮಾರ್, ಬಿ.ಎಸ್.ಪುಟ್ಟರಾಜು, ನಾಗರಾಜು, ಬಿ.ಎನ್.ಗಣೇಶ್,ಯೋಗೇಶ.ಬಿ.ಎನ್,ಬಯೋಗೇಗೌಡ, ಬಿ.ಎಸ್, ಕೃಷ್ಣಮೂರ್ತಿ, ಗೋಪಾಲ ಶೆಟ್ಟಿ, ಗೋಪಾಲ್ ರಾಜ್, ನಾಗೇಗೌಡ, ಸೋಮಶೇಖರ್, ತಮ್ಮೇಗೌಡ , ಕೃಷ್ಣೇಗೌಡ, ಮಾಚಗೋನಹಳ್ಳಿ ರಾಜು, ಯೋಗೇಂದ್ರ ಮತ್ತಿತರರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮಲ್ಲೇನಹಳ್ಳಿ ಎಂ.ಮೋಹನ್, ಕಾರ್ಯಾಧ್ಯಕ್ಷ ಮೆಣಸ ಮಹಾದೇವೇಗೌಡ, ರೈತ ಮೋರ್ಚಾ ಅಧ್ಯಕ್ಷ ಹುಲ್ಲೇಗೌಡ, ಟಿಎಪಿಸಿಎಂಎಸ್ ನಿರ್ದೇಶಕರಾದ ಕುರುಬಹಳ್ಳಿ ಕೆ.ಬಿ.ನಾಗೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ರಾಮಚಂದ್ರನ್, ಜಿ.ಪಂ.ಮಾಜಿ ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ, ಜೆಡಿಎಸ್ ಮುಖಂಡ ಮುಖಂಡರಾದ ಯಜಮಾನ್ ರಾಮಕೃಷ್ಣೇಗೌಡ, ದೊಡ್ಡಪಾಪೇಗೌಡ, ಗಂಜಿಗೆರೆ ಕೊಪ್ಪಲು ರಾಮಕೃಷ್ಣೇಗೌಡ, ಬಿ.ಎನ್ .ನಾಗರಾಜು, ಮಾಜಿ ಸೊಸೈಟಿ ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್, ಯುವ ಮುಖಂಡ ಸೋಮಶೇಖರ್, ಬಿ.ಎಂ.ಮಹೇಶ್,ನಾಗರಾಜು, ಸುಧಾಕರ್, ನಾಗೇಶ್, ದೊಡ್ಡಗಾಡಿಗನಹಳ್ಳಿ ಜೆ.ಸಿ.ಬಿ.ಕುಮಾರ್, ಕಬ್ಬಲಗೆರೆಪುರ ರಮೇಶ್, ರಾಮು, ಪರಮೇಶ್ ಉಪಸ್ಥಿತರಿದ್ದರು.ನೂತನವಾಗಿ ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾದ ಮುಖಂಡರನ್ನು ಪಕ್ಷಕ್ಕೆ ಪಕ್ಷದ ಶಾಲು ಹಾಕಿ ಬರಮಾಡಿಕೊಳ್ಳುವ ಮೂಲಕ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ತಾಲೂಕಿನಲ್ಲಿನ ನನ್ನ ಶಕ್ತಿ ಮೀರಿ ಜನರ ಸೇವೆ ಮಾಡಲು ಶ್ರಮಿಸುತ್ತಿದ್ದು ನನಗೆ ದೊರೆತ ಅನುದಾನವನ್ನು ಸಮರ್ಪಕವಾಗಿ ಎಲ್ಲಾ ಗ್ರಾಮಗಳಿಗೂ ಆದ್ಯತೆ ಅನುಸಾರ ನೀಡುತ್ತಾ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇನೆ. ಬಲ್ಲೇನಹಳ್ಳಿ ಗ್ರಾಮ ದೊಡ್ಡ ಗ್ರಾಮವಾಗಿದ್ದು ಇಲ್ಲಿನ ಕಾಂಗ್ರೆಸ್ ಪಕ್ಷದ ಮುಖಂಡರು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷದ ನಮ್ಮ ನಾಯಕರಾದ ದೇವೇಗೌಡ ಅಪ್ಪಾಜಿ, ಮಾಜಿ ಮುಖ್ಯಮಂತ್ರಿ ಕುಮಾರಣ್ಣನವರ ಜನಪರ ಕಾರ್ಯಗಳನ್ನು ಮೆಚ್ಚಿ ಪಕ್ಷ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಆ ಭಾಗದಲ್ಲಿ ಆನೆ ಬಂದಂತೆ ಆಗಿದೆ. ಜೊತೆಗೆ ಇದು ಸಂತಸದ ವಿಷಯವೂ ಆಗಿದೆ ಇದು ಮುಂದಿನ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಎಪಿಎಂಸಿ ಚುನಾವಣೆಗಳಲ್ಲಿ ಪಕ್ಷವು ಹೆಚ್ಚಿನ ಸಾಧನೆ ಮಾಡಲು ಅವಕಾಶವಾಗುತ್ತದೆ. ನಮ್ಮ ಪಕ್ಷಕ್ಕೆ ಎಲ್ಲರನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುವುದು ಎಂದು ಶಾಸಕರು ಭರವಸೆ ನೀಡಿದರು.*ವರದಿ, ಎಸ್ ರವಿ ಹೊನ್ನೇನಹಳ್ಳಿ*

Leave a Reply

Your email address will not be published. Required fields are marked *