November 20, 2026

*ಕೆ.ಆರ್.ಪೇಟೆಯಲ್ಲಿ ಮತ್ತೊಂದು ಅಗ್ರಿಗೋಲ್ಡ್ ಆಗಬಹುದ…!ಮುಂಚಿತವಾಗಿಯೇ ತನಿಖೆ ನಡೆಸಿ, ಜನರ ಹಣ ಉಳಿಸಿ ಎಂದು ಜಯಕರ್ನಾಟಕ ಸಂಘಟನೆ ಒತ್ತಾಯ*

0

ಕೆ.ಆರ್.ಪೇಟೆಯಲ್ಲಿ ಅಗ್ರಿಗೋಲ್ಡ್ ಮಾದರಿ ಮೋಸ ಆಗಬಹುದೆಂಬ ಭೀತಿ ಸ್ಥಳೀಯರಲ್ಲಿ ಮೂಡಿದೆ. ವಿವಿಧ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಾರ್ಯವೈಖರಿ ಕಂಡು ಕೆ ಆರ್ ಪೇಟೆ ತಾಲ್ಲೂಕು ಜಯ ಕರ್ನಾಟಕ ಸಂಘದ ತಾಲ್ಲೂಕು ಅಧ್ಯಕ್ಷ ಹೊನ್ನೇನಹಳ್ಳಿ ಸೋಮಶೇಖರ್ ನೇತೃತ್ವದಲ್ಲಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ ಎಚ್ಚರಿಕೆ ಹಾಕಿದರು ಪಟ್ಟಣದ ಜಯನಗರ ಬಡಾವಣೆ ಮೈಸೂರು ಮುಖ್ಯ ರಸ್ತೆಯಲ್ಲಿರುವ ಶಾಖಾ ಕಚೇರಿ ಮುಂದೆ ಜಮಾಯಿಸಿದ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಆಕ್ರೋಶ

ವ್ಯಕ್ತಪಡಿಸಿದ.ಬಳಿಕ ಸ್ಥಳಕ್ಕೆ ಕೆ ಆರ್ ಪೇಟೆ ಪಟ್ಟಣ ಪೊಲೀಸರನ್ನು ಕರೆಸಿ,ಕಂಪನಿಯ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಮಾತನಾಡಿದ ಹೊನ್ನೇನಹಳ್ಳಿ ಸೋಮಶೇಖರ್ ಅಗ್ರಿಗೋಲ್ಡ್ ರೀತಿಯಲ್ಲೇ ಗ್ರಾಮೀಣ ಮುಗ್ಧ ಜನರನ್ನೇ ಟಾರ್ಗೆಟ್ ಮಾಡಿ, ಹೆಚ್ಚಿನ ಲಾಭದ ಆಸೆ ತೋರಿಸಿ ಹಣ ಕಟ್ಟಿಸಿಕೊಳ್ಳಲಾಗುತ್ತಿದೆ ಎಂಬುದು ಸ್ಥಳೀಯರ ಮಾತು. ಆರ್.ಬಿ.ಐ. ಹಾಗೂ ಪುರಸಭೆಯಿಂದ ಯಾವುದೇ ಅನುಮತಿ ಪಡೆದಿಲ್ಲ ಎಂಬ ಗಂಭೀರ ಪ್ರಶ್ನೆಯೂ ಎದ್ದಿದೆ.ಅಗ್ರಿಗೋಲ್ಡ್ ನಲ್ಲಿ ಸಾವಿರಾರು ಜನ ಕೋಟ್ಯಂತರ ರೂ. ಕಳೆದುಕೊಂಡ ನೆನಪು ಇನ್ನೂ ಮಾಸಿಲ್ಲ ಅದೇ ರೀತಿ ಇಲ್ಲೂ ಜನರ ಹಣಕ್ಕೆ ಕುತ್ತು ಬರಬಹುದೆಂಬ ಆತಂಕ ಸ್ಥಳೀಯರಲ್ಲಿ ಹೆಚ್ಚಾಗಿದೆ. ಹೀಗಾಗಿ ಮೋಸ ಆಗುವ ಮುನ್ನವೇ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಮುಂಚಿತವಾಗಿಯೇ ತನಿಖೆ ನಡೆಸಿ, ಜನರ ಹಣ ಉಳಿಸಬೇಕು ಹಾಗೂ ಕಂಪನಿಯ ಅನುಮತಿ, ವ್ಯವಹಾರದ ಬಗ್ಗೆ ಸ್ಪಷ್ಟತೆ ನೀಡಬೇಕು ಎಂದು ಸ್ಥ ಆಗ್ರಹಿಸಿದರು.ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘದ ತಾಲ್ಲೂಕು ಯೂತ್ ಅಧ್ಯಕ್ಷ ಕಾಮನಹಳ್ಳಿ ಮಹೇಶ್, ಯುವರಾಜ್ ಮನು,ಸಂಘಟನೆ ಕಾರ್ಯದರ್ಶಿ ಶಂಕರ್, ಶಿವು, ಕಾರ್ತಿಕ್ ಸೇರಿದಂತೆ ಉಪಸ್ಥಿತರಿದ್ದರು.*ವರದಿ, ಎಸ್ ರವಿ ಹೊನ್ನೇನಹಳ್ಳಿ*

Leave a Reply

Your email address will not be published. Required fields are marked *

You may have missed