August 16, 2026

ಕೆ ಆರ್ ಪೇಟೆ ಪಟ್ಟಣದಲ್ಲಿ ಜನಪ್ರಿಯ ಶಾಸಕರಾದ ಹೆಚ್ ಟಿ ಮಂಜಣ್ಣರವರ ಸಮ್ಮುಖದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಚೆನ್ನಮ್ಮ ರವರ ನುಡಿ ನಮನ ಕಾರ್ಯಕ್ರಮ

0

ಪೂಜ್ಯ ಶ್ರೀಮತಿ ದಿ.ಚೆನ್ನಮ್ಮ ಅವರ ಪವಿತ್ರ ಸ್ಮರಣಾರ್ಥ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸನ್ಮಾನ್ಯ ಶ್ರೀ ಎಚ್.ಡಿ. ದೇವೇಗೌಡ ಅಪ್ಪಾಜಿ ಅವರ ಆಜ್ಞೆಯಂತೆ, ದಿವಂಗತ ಶ್ರೀಮತಿ ದಿ.ಚೆನ್ನಮ್ಮ ಅವರ 11ನೇ ದಿನದ ಹಾಲು-ತುಪ್ಪದ ಕಾರ್ಯದ ಪತ್ರಿಕೆಗಳನ್ನು ಕೆ.ಆರ್ ಪೇಟೆ ತಾಲ್ಲೂಕಿನ ಎಲ್ಲಾ ಜಾತ್ಯಾತೀತ ಜನತಾದಳದ ಮುಖಂಡರುಗಳಿಗೆ ವಿತರಿಸಿ, ತಮ್ಮ ತಮ್ಮ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರಿಗೆ ತಲುಪಿಸುವಂತೆ ಹಾಗೂ ಕಾರ್ಯಕ್ರಮದ ಮಾಹಿತಿಯನ್ನು ವ್ಯಾಪಕವಾಗಿ ಹಂಚುವಂತೆ ಮನವಿ ಮಾಡಲಾಯಿತು.

ದಿವಂಗತ ಶ್ರೀಮತಿ ಚೆನ್ನಮ್ಮ ಅವರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿ ಹಾಗೂ ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು

Leave a Reply

Your email address will not be published. Required fields are marked *