August 16, 2026

ದಸರಾ ಉದ್ಘಾಟನೆ ರೇಸ್‌ನಲ್ಲಿ ಕ್ರಿಕೆಟ್ ಸಾಧಕರ ಹೆಸರು – ಸಿಎಂ ನಿರ್ಧಾರವೇ ಅಂತಿಮ: ಡಾ.ಯತೀಂದ್ರ

0

ಮೈಸೂರು: ಈ ಬಾರಿಯ ದಸರಾ ಉದ್ಘಾಟಕರ ಹೆಸರನ್ನು ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರೇ ಆಯ್ಕೆ ಮಾಡಲಿದ್ದು, ಅವರ ನಿರ್ಧಾರವೇ ಅಂತಿಮ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಹೇಳಿದ್ದಾರೆ.ದಸರಾ (Mysuru Dasara) ಸಿದ್ಧತಾ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಸರಾ ಉದ್ಘಾಟನೆ ವಿಚಾರದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರ ನಿರ್ಧಾರ ಅಂತಿಮ. ನಾವೆಲ್ಲರೂ ಉದ್ಘಾಟಕರ ಆಯ್ಕೆಯನ್ನು ಅವರಿಗೆ ಬಿಟ್ಟಿದ್ದೇವೆ. ಶಾಸಕರು ಒಂದಷ್ಟು ಸಲಹೆ ಕೊಟ್ಟಿದ್ದಾರೆ. ಯಾವುದೇ ಹೆಸರನ್ನು ಆಯ್ಕೆ ಮಾಡಿದ್ರು ಸಿಎಂ ಆಯ್ಕೆ ಮಾಡ್ತಾರೆ. ಇನ್ನೂ ಈ ಬಾರಿ ದಸರಾದಲ್ಲಿ 17 ಉಪಸಮಿತಿಗಳನ್ನು ರಚನೆ ಮಾಡಲು ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಹೆಸರು ಮುಂಚೂಣಿಯಲ್ಲಿದೆ

Leave a Reply

Your email address will not be published. Required fields are marked *