ಚೆನ್ನಮ್ಮ ಉತ್ತರ ಕ್ರಿಯಾದಿ: ಸಮಾಧಿ ಮುಂದೆ ಪತ್ನಿ ನೆನೆದು ಕಣ್ಣೀರಿಟ್ಟ ಮಾಜಿ ಪ್ರಧಾನಿ ದೇವೇಗೌಡ

ಹಾಸನ: ಇತ್ತೀಚಿಗೆ ನಿಧನರಾದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ 11ನೇ ದಿನದ ಉತ್ತರ ಕ್ರಿಯಾದಿ ಕಾರ್ಯ ಗುರುವಾರ ನೆರವೇರಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯ ಮಾವಿನಕೆರೆ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಡೆದ ಉತ್ತರ ಕ್ರಿಯಾದಿ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಅವರ ಕುಟುಂಬದ ಬಹುತೇಕ ಎಲ್ಲಾ ಸದಸ್ಯರು, ಹಲವು ಗಣ್ಯರು ಹಾಗೂ ಸಾವಿರಾರು ಜನ ಕಾರ್ಯಕರ್ತರು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು.
ಸಮಾಧಿ ಸ್ಥಳದಲ್ಲಿದ್ದ ಎಚ್ ಡಿ ದೇವೇಗೌಡ ಅವರು ಪತ್ನಿಯನ್ನು ನೆನದು ಭಾವುಕರಾದರು. ಇದಕ್ಕು ಮುನ್ನ ಹೊಳೆನರಸೀಪುರದ ಎಚ್ ಡಿ ರೇವಣ್ಣ ಅವರ ನಿವಾಸದಲ್ಲಿ ನಡೆದ ವಿಧಿ-ವಿಧಾನದ ವೇಳೆಯೂ ದೇವೇಗೌಡರು ಕಣ್ಣೀರಿಟ್ಟರು.
