August 16, 2026

ನೊಂದ ಮಹಿಳೆಯರಿಗಾಗಿ ಮಹಿಳೆಯರಿಂದಲೇ ಪ್ರಾರಂಭವಾದ ಜನಶಕ್ತಿ ವೇದಿಕೆ

0

ನೊಂದ ಮಹಿಳೆಯರಿಗಾಗಿ ಮಹಿಳೆಯರಿಂದಲೇ ಪ್ರಾರಂಭವಾದ ಜನಶಕ್ತಿ ವೇದಿಕೆ

ಆಗಸ್ಟ್ 13, ಮೈಸೂರು ; ಅಖಿಲ ಕರ್ನಾಟಕ ಜನಶಕ್ತಿ ವೇದಿಕೆ ಹೊಸದಾಗಿ ಪ್ರಾರಂಭವಾದ ಹಿನ್ನೆಲೆ ಸಂಘಟನೆಯನ್ನು ಬಳಪಡಿಸಲು ರಾಜ್ಯಾಧ್ಯಕ್ಷರಾದ ಶಾಂತಿ ರಾಜ್ ನೇತೃತ್ವದಲ್ಲಿ ಪದಾಧಿಕಾರಿಗಳ ಮೊಟ್ಟ ಮೊದಲ ಸಭೆಯನ್ನು ನಡೆಸಲಾಯಿತು.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಸಭೆಯ ನಂತರ ನೂತನ ಮಹಿಳಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ನೇಮಕಾತಿ ಪತ್ರವನ್ನು ನೀಡಿ ಅಖಿಲ ಕರ್ನಾಟಕ ಜನಶಕ್ತಿ ವೇದಿಕೆಗೆ ಜಯವಾಗಲಿ ಎಂದು ಘೋಷಣೆ ಕೂಗಿ ಮಾತನಾಡಿದ ರಾಜ್ಯಧ್ಯಕ್ಷರಾದ ಶಾಂತಿರಾಜ್ ರವರು ರಾಜ್ಯದಲ್ಲಿ ಮಹಿಳೆಯರಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದು, ಮಹಿಳೆಯರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ, ಮಹಿಳೆಯರಿಗೆ ರಾಜ್ಯದಲ್ಲಿ ಯಾವುದೇ ಕ್ಷೇತ್ರದಲ್ಲಿ ಸಮಾನತೆ ಇಲ್ಲದಿರುವುದರಿಂದ ಸಮಾನ ಸ್ಥಾನಮಾನಗಳಿಗೆ ಹಾಗೂ ಶೋಷಿತ ಮಹಿಳೆಯರ ಪರ ಧ್ವನಿಯಾಗಿ ನಿಲ್ಲಲು ನಮ್ಮ ಅಖಿಲ ಕರ್ನಾಟಕ ಜನಶಕ್ತಿ ವೇದಿಕೆ ನಿರ್ಧರಿಸಿದೆ, ರಾಜ್ಯದಲ್ಲಿ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯವನ್ನು ಎದುರಿಸಲು ನಾವು ನಮ್ಮ ಸಂಘಟನೆಯನ್ನು ರಾಜ್ಯದ್ಯಂತ ಬಲಪಡಿಸುತ್ತೇವೆ ಎಂದು ತಿಳಿಸಿದರು.

ಬಾಕ್ಸ್
ಅಖಿಲ ಕರ್ನಾಟಕ ಜನಶಕ್ತಿ ವೇದಿಕೆಯು ಒಂದು ಒಳ್ಳೆ ವೇದಿಕೆಯಾಗಿದ್ದು ಅನ್ಯಾಯಕ್ಕೆ ಒಳಗಾದ ಮಹಿಳೆಯರ ಪರವಾಗಿ ನಿಲ್ಲುವ ಒಂದು ಮಹಿಳಾ ಶಕ್ತಿಯಾಗಿ ನೊಂದ ಮಹಿಳೆಯರ ಧ್ವನಿಯಾಗಿ ಈ ವೇದಿಕೆ ಕೆಲಸ ಮಾಡುತ್ತದೆ, ನಮ್ಮ ರಾಜ್ಯಾಧ್ಯಕ್ಷರಾದ ಶಾಂತಿರಾಜ್ ನೇತೃತ್ವದಲ್ಲಿ ರಾಜ್ಯಧ್ಯಂತ ಸಂಘಟನೆ ಬಳಪಡಿಸಿಕೊಂಡು ನ್ಯಾಯದ ಪರ ಹೋರಾಡುವ ಒಂದು ಉತ್ತಮ ವೇದಿಕೆಯಾಗಿ ನಮ್ಮ ಜನಶಕ್ತಿ ವೇದಿಕೆ ನಿಲ್ಲುತ್ತದೆ.

  • ಗೀತಾ (ಜಿಲ್ಲಾಧ್ಯಕ್ಷರು)
    ಮೈಸೂರು.

ಇದೆ ಸಂದರ್ಭದಲ್ಲಿ ಮೈಸೂರು ಜಿಲ್ಲಾಧ್ಯಕ್ಷರಾದ ಗೀತಾ ಎಲ್ ಎಲ್, ನಾಗರಾಧ್ಯಕ್ಷರಾದ ದಿವ್ಯಾರಾಣಿ ಎಂ, ಜಿಲ್ಲಾ ಉಪಾಧ್ಯಕ್ಷರಾದ ಶಶಿಕಲಾ, ಜಿಲ್ಲಾ ನಗರ ಉಪಾಧ್ಯಕ್ಷರಾದ ಕಾಮಾಕ್ಷಿ ಎಂ, ಕಾನೂನು ಸಲಹೆಗಾರರಾದ ಮನೋಣ್ಮಣಿ, ನಾಗರತ್ನ, ಕಲ್ಪನಾ, ಶೈಲಾ, ಸುಧಾಮಣಿ, ಲೀಲಾವತಿ, ಮಹೇಶ್ವರಿ, ಶಾಂಭವಿ, ರೇಖಾ, ಪ್ರೇಮಾ ಶಂಕರ್, ಶ್ರೀಲಕ್ಷ್ಮೀ, ಹಾಗೂ ಶಶಿಕಲಾ ಶಿವರಾಜ್, ಶುಭಮಣಿ, ಸೇರಿದಂತೆ ಹಲವಾರು ಪದಾಧಿಕಾರಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *