ಶಾಂತಿ ಕ್ರಾಂತಿ’ ಸಿನಿಮಾದ ರೀ-ರಿಲೀಸ್ ಬಗ್ಗೆ ರವಿಚಂದ್ರನ್ ಹಿರಿಮಗ ಮನೋರಂಜನ್ ಹೇಳಿದ್ದೇನು? 35ವರ್ಷಗಳ ಕನಸು ನನಸಾಗುತ್ತಾ?

ಶಾಂತಿ ಕ್ರಾಂತಿ’ ಸಿನಿಮಾ ಮರು ಬಿಡುಗಡೆ ಕುರಿತು ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ‘ಶಾಂತಿ ಕ್ರಾಂತಿ’ ಸಿನಿಮಾ ಮರುಬಿಡುಗಡೆ ಮಾಡಿ ಎಂದು ಹ್ಯಾಷ್‌ಟ್ಯಾಗ್‌ಗಳ ಮೂಲಕ ಜನತೆ ಕೇಳುತ್ತಿದ್ದಾರೆ. 1991ರಲ್ಲಿ ರಿಲೀಸ್ ಆಗಿದ್ದ ಸಿನಿಮಾ ಸೋಲು ಕಂಡಿತ್ತು. ಮೂರು ಭಾಷೆಯಲ್ಲಿಯೋ ಚಿತ್ರಿಕರಣ ಮಾಡಿ, ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ರವಿಚಂದ್ರನ್ ಎಂಬ ಹೆಸರು ತಂದು ಕೊಟ್ಟಿತ್ತು. ಈ ಸಿನಿಮಾ ತೆಗೆದ ಕ್ರೇಜಿ ಥಾಟ್ಸ್‌ಗೆ ‘ಕ್ರೇಜಿ ಸ್ಟಾರ್’ ಎಂಬ ಬಿರುದು ಕೂಡ ರವಿಚಂದ್ರನ್ ಅವರಿಗೆ ಲಭಿಸಿತು. ಆದರೆ, ಹೂಡಿದ ಬಂಡವಾಳ ಮಾತ್ರ ಬರಲಿಲ್ಲ. ಇದೇ ಕಾರಣಕ್ಕೆ ಈಗಿನ ಯುವ ಜನತೆ‘ಶಾಂತಿ ಕ್ರಾಂತಿ’ ಮತ್ತೊಮ್ಮೆ ಬಿಡುಗಡೆ ಮಾಡಿ ಎನ್ನುತ್ತಿದ್ದಾರೆ. ಆಗಿನ ರವಿಚಂದ್ರನ್ ಯೋಚನೆಗಳು, ಈಗಿನ ಪೀಳಿಗೆಯನ್ನ ಆಕರ್ಷಿಸುತ್ತಿದೆ. ಈ ರೀ-ರಿಲೀಸ್ ಟ್ರೆಂಡ್ ಕುರಿತು ಮನೋರಂಜನ್ ರವಿಚಂದ್ರನ್ ಅವರು ಮಾತ್ನಾಡಿದ್ದಾರೆ.
