ಹುಣಸೂರು ತಾಲೂಕು ಹನಗೋಡು ಭಾಗದಲ್ಲಿ ಹುಲಿ ಹಾವಳ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಸೂಚನೆ…

ಹುಣಸೂರು ತಾಲೂಕು ಹನಗೋಡು ಭಾಗದಲ್ಲಿ ಹೆಚ್ಚಾದ ಹುಲಿ ಹಾವಳಿಗೆ ಬ್ರೇಕ್ ಹಾಕಲು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.ಈ ವೇಳೆ ಸ್ಥಳೀಯರು ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಶೀಘ್ರಸೆರೆಗೆ ಒತ್ತಾಯಿಸಿದ್ದಾರೆ.ಈ ಮಾಹಿತಿ ಅರಿತ ಮಾಜಿ ಶಾಸಕ ಮಂಜುನಾಥ್ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಮನ ಒಲಿಸುವಲ್ಲಿ ಯಶಸ್ವಿಯಾಗಿದ್ದಾರೆ.ಹುಲಿ ಸೆರೆ ಕಾರ್ಯಾಚರಣೆ ಸುಲಭವಲ್ಲ ಇದಕ್ಕೆ ನಿಮ್ಮಸಹಕಾರ ಅಗತ್ಯ ಎಂದು ಮಂಜುನಾಥ್ ಗ್ರಾಮಸ್ಥರಲ್ಲಿ ಮನವಿ ಮಾಡಿ ಮನ ಒಲಿಸಿದ್ದಾರೆ.ಕೂಡಲೇ ಹುಲಿ ಕಾರ್ಯಾಚರಣೆ ಆರಂಭಿಸಿ ಸ್ಥಳೀಯರ ಆತಂಕ ದೂರ ಮಾಡುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ…
