*ವಕೀಲರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ ಮತ್ತು ಅನ್ಯಾಯದ ವಿರುದ್ಧ ಕೆ ಆರ್ ಪೇಟೆ ವಕೀಲರ ಸಂಘದ ವತಿಯಿಂದ ಮುಷ್ಕರ ಮತ್ತು ಪ್ರತಿಭಟನೆ*

ಕೆ.ಆರ್.ಪೇಟೆ: ವಕೀಲರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ ಮತ್ತು ಅನ್ಯಾಯದ ವಿರುದ್ಧ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಮುಷ್ಕರ ಮತ್ತು ಪ್ರತಿಭಟನೆಗೆ ಕೆ.ಆರ್.ಪೇಟೆ ವಕೀಲರ ಸಂಘವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಎಂ.ಆರ್. ನಾಗೇಗೌಡ ತಿಳಿಸಿದರು. ಕೆ.ಆರ್.ಪೇಟೆ ವಕೀಲರ ಸಂಘದಲ್ಲಿ ಸಭೆ ನಡೆಸಿದ ನಂತರ ನ್ಯಾಯಾಲಯದ ಕಲಾಪವನ್ನು ಬಹಿಷ್ಕರಿಸಿ ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ವಕೀಲರ ಮೇಲೆ ದಿನೇ ದಿನೇ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ವಕೀಲರ ಹಿತರಕ್ಷಣಾ ಕಾಯಿದೆ ಜಾರಿಗೆ ಬರುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಪರಸ್ಪರ ಸಮನ್ವಯದೊಂದಿಗೆ ರಾಜ್ಯದ ಪ್ರತಿಯೊಂದು ಭಾಗದಲ್ಲಿಯೂ ನಮ್ಮ ವಕೀಲ ಮಿತ್ರರು ಹೋರಾಟ ನಡೆಸುತ್ತಿದ್ದಾರೆ. ನಮ್ಮ ವೃತ್ತಿ ಒಂದೇ, ನಮ್ಮ ಗುರುತು ಒಂದೇ. ನಮ್ಮೆಲ್ಲರ ವೃತ್ತಿಪರ ಗುರುತು ವಕೀಲರು ಎಂಬುದೇ ಆಗಿದೆ. ವಕೀಲ ಸಮುದಾಯವೇ ನಮ್ಮ ಕುಟುಂಬ. ಈ ಹೋರಾಟದಲ್ಲಿ ಯಾವುದೇ ರಾಜಕೀಯ, ವೈಯಕ್ತಿಕ ಹಿತಾಸಕ್ತಿ ಅಥವಾ ಸಂಘಟನಾತ್ಮಕ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ಎಲ್ಲರೂ ಒಂದಾಗಿ ಈ ಪ್ರತಿಭಟನೆಯ ಮೂಲಕ ಸರ್ಕಾರಕ್ಕೆ, ಸಮಾಜಕ್ಕೆ ಮತ್ತು ನ್ಯಾಯಾಂಗಕ್ಕೆ ಒಂದು ಸ್ಪಷ್ಟವಾದ ಸಂದೇಶವನ್ನು ನೀಡಬೇಕಾಗಿದೆ. ವಕೀಲರ ಗೌರವ, ಘನತೆ, ಸ್ವಾಭಿಮಾನ, ಸುರಕ್ಷತೆ ಮತ್ತು ವೃತ್ತಿಪರ ಹಕ್ಕುಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲು ಸಾಧ್ಯವಿಲ್ಲ ಎಂಬುದನ್ನು ನಮ್ಮ ಒಗ್ಗಟ್ಟಿನ ಮೂಲಕ ತೋರಿಸಬೇಕಾಗಿದೆ. ಒಬ್ಬ ವಕೀಲನಿಗೆ ಅನ್ಯಾಯವಾದಾಗ ಇಡೀ ವಕೀಲ ಸಮುದಾಯ ಅವನ ಬೆನ್ನಿಗೆ ನಿಲ್ಲಬೇಕು. ನಮ್ಮಲ್ಲಿ ಒಗ್ಗಟ್ಟು, ಸಂಘಟಿತ ಶಕ್ತಿ ಮತ್ತು ಪರಸ್ಪರ ಸಹಕಾರವಿದ್ದಾಗ ಮಾತ್ರ ನಮ್ಮ ಧ್ವನಿಗೆ ನಿಜವಾದ ಬಲ ದೊರೆಯುತ್ತದೆ ಎಂದು ನಾಗೇಗೌಡ ತಿಳಿಸಿದರು.ವಕೀಲರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದ ಶಾಸಕ ಎಚ್.ಟಿ. ಮಂಜು ನಂತರ ಮಾತನಾಡಿ ವಕೀಲರ ಮೇಲೆ ಒಂದಲ್ಲ ಒಂದು ರೀತಿಯ ದೌರ್ಜನ್ಯ, ಹಲ್ಲೆಗಳು ನಡೆಯುತ್ತಿದ್ದು, ಇದಕ್ಕೆ ಕಾನೂನಾತ್ಮಕವಾಗಿ ಸೂಕ್ತ ಕಠಿಣ ಕಾನೂನು ವ್ಯವಸ್ಥೆ ಜಾರಿಯಾಗಬೇಕು, ಈ ನಿಟ್ಟಿನಲ್ಲಿ ನಾನು ವಿಧಾನ ಸಭಾ ಕಲಾಪ ದ ಚರ್ಚಿಸಿ ವಕೀಲರಿಗೆ ನ್ಯಾಯ ಒದಗಿಸುವ ಕೆಲಸವನ್ನು ಪ್ರಾಮಾಣಿಕ ವಾಗಿ ಮಾಡುವುದಾಗಿ ಶಾಸಕ ಮಂಜು ತಿಳಿಸಿದರು.ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ನಾಗೇಗೌಡ, ಉಪಾಧ್ಯಕ್ಷ ಪುರುಷೋತ್ತಮ, ಕಾರ್ಯದರ್ಶಿ ಎಸ್.ಜೆ. ಮಂಜೇಗೌಡ, ಜಂಟಿ ಕಾರ್ಯದರ್ಶಿ, ಖಜಾಂಚಿ ಪ್ರಸನ್ನ, ದೊಡ್ಡಯ್ಯ, ಹಿರಿಯ ವಕೀಲರಾದ ಜಿ.ಆರ್.ಅನಂತರಾಮಯ್ಯ, ಎಂ.ಆರ್.ಪ್ರಸನ್ನಕುಮಾರ್, ಶಿವರಾಂ, ಕೆ.ಎನ್.ನಾಗರಾಜು, ವಕೀಲರಾದ ನಿರಂಜನ್, ಎಸ್.ಆರ್.ನವೀನ್ ಕುಮಾರ್, ಎಸ್.ಸತೀಶ್, ಎನ್.ಮಂಜುನಾಥ್, ಜಿ.ಕೆ. ಸತೀಶ್, ಸುಪ್ರೀತಾ ಯು, ಪೀ.ಬಿ ಮಂಜುನಾಥ್, ಕೆ ಟಿ ವಿಶ್ವನಾಥ್, ಜಿ.ವಿ ಜಗದೀಶ್, ನಾರ್ಗೋನಹಳ್ಳಿ, ಜಗದೀಶ್, ತೆಂಗಿನಘಟ್ಟ ಜಗದೀಶ್, ಶಿವಕುಮಾರ್, ಯೋಗೇಶ್, ಅನ್ವೇಶ್, ಬಿಸಿ ಹರ್ಷ, ಬಿ ಏನ್.ಸತೀಶ್, ರಾಣಿ, ರಶ್ಮಿ, ಭಾವನ, ಸೇರಿದಂತೆ ನೂರಾರು ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು*ವರದಿ, ಎಸ್ ರವಿ ಹೊನ್ನೇನಹಳ್ಳಿ*
