August 31, 2026

ಕನ್ನಡ ಸೇರಿದಂತೆ 400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟಿ ಸಾಹುಕಾರ್ ಜಾನಕಿ ನಿಧನ

0

ಚೆನ್ನೈ (ತಮಿಳುನಾಡು): ದಕ್ಷಿಣ ಭಾರತ ಚಿತ್ರರಂಗದ ಅತ್ಯಂತ ಹಿರಿಯ ನಟಿ, ಕನ್ನಡ ಸೇರಿದಂತೆ 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಸಾಹುಕಾರ್​ ಜಾನಕಿ ಅವರು ತಮ್ಮ 94ನೇ ವಯಸ್ಸಿನಲ್ಲಿ ನಿಧನರಾದರು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಚೆನ್ನೈನ ಅಲ್ವಾರ್‌ಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ನಿಧನವನ್ನು ನಾಡಿಗರ್ ಸಂಗಮ್ ಅಧ್ಯಕ್ಷ ಮತ್ತು ನಟ ನಾಸರ್ ಅವರಿಂದು ದೃಢಪಡಿಸಿದ್ದಾರೆ.

ಸಾಹುಕಾರ್ ಜಾನಕಿ ಮಧ್ಯಾಹ್ನ 1:59ಕ್ಕೆ ನಿಧನರಾದರೆಂದು ನಾಸರ್ ತಿಳಿಸಿದ್ದಾರೆ. ಅವರ ಪಾರ್ಥೀವ ಶರೀರವನ್ನು ಸಂಜೆ 5 ಗಂಟೆಯಿಂದ ತೇನಾಂಪೇಟೆಯ ಸೆಂಟೋಫ್ ರಸ್ತೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದು.

ಜಾನಕಿ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ನಟಿ ಕಾಯಲ್ ದೇವರಾಜ್ ಇತ್ತೀಚಿಗೆ ಮಾಹಿತಿ ಹಂಚಿಕೊಂಡಿದ್ದರು. ಹಿರಿಯ ನಟಿಯನ್ನು ಅಲ್ವಾರ್‌ಪೇಟೆಯ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಹಿರಂಗಪಡಿಸಿದ್ದರು. ನಾಸರ್, ನಾಡಿಗರ್ ಸಂಗಮ್ ಸದಸ್ಯರಾದ ಸೌಂದರರಾಜ ಮತ್ತು ಹೇಮಚಂದ್ರನ್ ಅವರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದರು.

Leave a Reply

Your email address will not be published. Required fields are marked *