ಟಾಕ್ಸಿಕ್ ಟಿಕೆಟ್ಗೆ ಭಾರಿ ಡಿಮ್ಯಾಂಡ್: ಅಡ್ವಾನ್ಸ್ ಬುಕಿಂಗ್ ಓಪನ್; ಕರ್ನಾಟಕವೊಂದರಲ್ಲೇ…!

ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ನಾಲ್ಕುವರೆ ವರ್ಷಗಳ ಬಳಿಕ ಬಿಗ್ ಸ್ಕ್ರೀನ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ನ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಇಂದು ಭಾರತದಲ್ಲಿ ಅಧಿಕೃತವಾಗಿ ಆರಂಭ ಕಂಡಿದೆ. ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಆರಂಭಿಕ ಪ್ರತಿಕ್ರಿಯೆಯು, ವಿಶೇಷವಾಗಿ ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಸೂಚಿಸಿದೆ. ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಚಿತ್ರದ ಕ್ರೇಜ್ ಈಗ ಅಂಕಿಅಂಶಗಳಲ್ಲಿ ಸಾಬೀತಾಗುತ್ತಿದೆ.
ಹೌದು, ಕೆಲವೇ ಗಂಟೆಗಳಲ್ಲಿ, ಬಹುನಿರೀಕ್ಷಿತ ಚಿತ್ರವು ಬುಕ್ ಮೈ ಶೋನಲ್ಲಿ 100,000ಕ್ಕೂ ಹೆಚ್ಚು ಟಿಕೆಟ್ಗಳನ್ನು ಮಾರಾಟ ಮಾಡುವ ಮೂಲಕ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ. ಮೊದಲ ಗಂಟೆಯಲ್ಲಿ ಸರಿ-ಸುಮಾರು 3,050 ಟಿಕೆಟ್ಗಳಿಂದ ಪ್ರಾರಂಭವಾಗಿ, ಬೆಳಗ್ಗೆ 10 ರಿಂದ 11ರ ನಡುವೆ ಗರಿಷ್ಠ ಮಟ್ಟವನ್ನು ತಲುಪಿತು. 60 ನಿಮಿಷಗಳಲ್ಲಿ ಸುಮಾರು 27,000 ಟಿಕೆಟ್ಗಳು ಮಾರಾಟವಾದವು.
