2037 ಕ್ಕೆ ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆ ಮಾಡುವುದು ನಮ್ಮ ಗುರಿ: ಡಿ.ಕೆ. ಶಿವಕುಮಾರ್;

ಬೆಂಗಳೂರು: ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವುದು, ಅಪೌಷ್ಟಿಕತೆಯ ಪ್ರಮಾಣವನ್ನು ಶೇ.5ಕ್ಕಿಂತ ಕಡಿಮೆಗೊಳಿಸುವುದು ಹಾಗೂ ಶಾಲೆಯಿಂದ ಹೊರಗುಳಿಯುವ ವಿದ್ಯಾರ್ಥಿಗಳ ಸಂಖ್ಯೆ ಶೂನ್ಯಕ್ಕೆ ತರುವುದು ಸೇರಿದಂತೆ 2037ರ ವೇಳೆಗೆ ಸಾಧಿಸುವ ಗುರಿಗಳನ್ನು ಒಳಗೊಂಡ “ಮೆಗಾ ಸಂಕಲ್ಪ”ವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದರು.ಡಿ ಕೆ ಶಿವಕುಮಾರ್ ಅವರು ಅನಾವರಣಗೊಳಿಸಿದ ನವ ಸಂಕಲ್ಪ(ಒಂಬತ್ತು ಸಂಕಲ್ಪಗಳು)ಗಳಲ್ಲಿ ಹೊಸ ಆರೋಗ್ಯ ವಿಮಾ ಯೋಜನೆ, 3 ಲಕ್ಷ ಕೋಟಿ ರೂಪಾಯಿ ಹೊಸ ಹೂಡಿಕೆಗಳನ್ನು ಆಕರ್ಷಿಸುವುದು, ಬೆಂಗಳೂರಿನಾಚೆಗೂ ಅಭಿವೃದ್ಧಿಯ ವೇಗ ಹೆಚ್ಚಿಸಲು ಐದು ಹೊಸ ಪ್ರಮುಖ ನಗರಗಳನ್ನು ನಿರ್ಮಿಸುವುದು, ಮುಂದಿನ 500 ದಿನಗಳಲ್ಲಿ 1.5 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡುವುದು, ಸರ್ಕಾರಿ ಹುದ್ದೆಗಳಿಗೆ 1 ಲಕ್ಷ ನೇಮಕಾತಿ ಹಾಗೂ ಖಾಸಗಿ ವಲಯದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿಸುವುದು ಸೇರಿವೆ.
