ನೇರಲ್ಕೆರೆ ಬನ್ನೂರು ಗಡಿಭಾಗ ಮರಯ್ಯನಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆ ಮೈಸೂರು ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ನೇತೃತ್ವದಲ್ಲಿ ಪ್ರತಿಭಟನೆ

ಹಮ್ಮಿಕೊಂಡಿದ್ದು ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಕೆರೆಗಳಿಗೆ ನೀರು ತುಂಬಿಸಿದ ಜಿಲ್ಲಾ ಆಡಳಿತ ಹಾಗೂ ನೀರಾವರಿ ಅಧಿಕಾರಿಗಳ ವಿರುದ್ಧ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಕೂಡಲೇ ನೀರು ತುಂಬಿಸುವಂತೆ ಆಗ್ರಹ ಮಾಡಿದರು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಇನ್ನಾ 2 ದಿನದಲ್ಲಿ ನೀರು ತುಂಬಿಸುತ್ತೇನೆ ಎಂದು ಭರವಸೆ ಕೊಟ್ಟರು
