ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಲಾವಿದರಿಂದ ದಾಖಲೆಯ 3,893 ಅರ್ಜಿ: ಹೊರರಾಜ್ಯದ ಕಲಾವಿದರಿಂದಲೂ ಆಸಕ್ತಿ!
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಲು ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಕಲಾವಿದರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈ ಬಾರಿ ದಾಖಲೆಯ 3,893 ಅರ್ಜಿ ಸಲ್ಲಿಕೆಯಾಗಿದೆ. ಕರ್ನಾಟಕ ಮಾತ್ರವಲ್ಲದೆ ಕೇರಳ, ಆಂಧ್ರಪ್ರದೇಶ, ಮಣಿಪುರ, ದೆಹಲಿ, ಅಸ್ಸಾಂ ಮತ್ತು ಮಹಾರಾಷ್ಟ್ರಗಳಿಂದಲೂ ಕೂಚುಪುಡಿ, ಕಥಕ್, ಮೋಹಿನಿಅಟ್ಟಂ ಹಾಗೂ ಶಾಸ್ತ್ರೀಯ ಸಂಗೀತ ಪ್ರದರ್ಶನಕ್ಕೆ ಮನವಿ ಸಲ್ಲಿಕೆಯಾಗಿದೆ. ಅಕ್ಟೋಬರ್ 11ರಂದು ಅರಮನೆಯ ಮುಂಭಾಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾಂಸ್ಕೃತಿಕ ದಸರಾಗೆ ಚಾಲನೆ ನೀಡಲಿದ್ದು, ನಗರದ 10 ವಿವಿಧ ವೇದಿಕೆಗಳಲ್ಲಿ ನಾಟಕ, ಜಾನಪದ, ಯಕ್ಷಗಾನ ಹಾಗೂ ಸಂಗೀತ ಕಛೇರಿಗಳು ನಡೆಯಲಿವೆ. ಈ ಕುರಿತ ಮಾಹಿತಿ ಇಲ್ಲಿದೆ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅರಮನೆ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ದೇಶದ ವಿವಿಧೆಡೆಯ ಖ್ಯಾತನಾಮ ಕಲಾವಿದರು ಉತ್ಸಾಹ ತೋರಿದ್ದು, ಈ ಬಾರಿ ಮಣಿಪುರ, ಕೇರಳ, ಆಂಧ್ರಪ್ರದೇಶದಿಂದಲೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅರ್ಜಿಗಳು ಬಂದಿವೆ.
