August 16, 2026

ಕೆಎಂಎಫ್ ನಂದಿನಿ ತುಪ್ಪ, ಬೆಣ್ಣೆ ಬೆಲೆ ದಿಢೀರ್ ಏರಿಕೆ: ಇಂದಿನಿಂದ ಹೊಸ ದರ ಜಾರಿ!

0

ಬೆಂಗಳೂರು: ಕೆಎಂಎಫ್ನ ನಂದಿನಿ ಬ್ರಾಂಡ್ನ ತುಪ್ಪ ಮತ್ತು ಬೆಣ್ಣೆಯ ಬೆಲೆಯನ್ನು ದಿಢೀರ್ ಹೆಚ್ಚಳ ಮಾಡಿದೆ. ಪರಿಷ್ಕೃತ ದರವು ಇಂದಿನಿಂದ (ಜುಲೈ 24 ಶುಕ್ರವಾರ) ಜಾರಿಗೆ ಬರಲಿದೆ. ಬೆಣ್ಣೆ ಮತ್ತು ತುಪ್ಪದ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಕೆಯಾಗಿದೆ.ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ವ್ಯಾಪ್ತಿಗೆ ಒಳಪಡುವ ಬಮೂಲ್ ಬೆಲೆ ಏರಿಕೆ ಕುರಿತಂತೆ ಆದೇಶ ಹೊರಡಿಸಿದ್ದು, ಒಂದು ಲೀಟರ್ ತುಪ್ಪದ ಸ್ಯಾಚೆಟ್ ದರವು 700 ರೂಪಾಯಿಗಳಿಂದ 715 ರೂಪಾಯಿಗೆ ಏರಿಕೆ ಮಾಡಲಾಗಿದೆ. ಹಾಗೆಯೇ ಒಂದು ಕೆಜಿ ಬೆಣ್ಣೆಯ ದರವನ್ನು 610 ರೂಪಾಯಿಗಳಿಂದ 660 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.ನಂದಿನಿ ಬ್ರಾಂಡ್ನ ಬೆಣ್ಣೆ ಮತ್ತು ತುಪ್ಪ ಕೆಎಂಎಫ್ನ ಜನಪ್ರಿಯ ಉತ್ಪನ್ನಗಳಾಗಿದ್ದು, ಹಠಾತ್ತನೇ ದರ ಹೆಚ್ಚಳ ಮಾಡಿರುವುದು ಜನ ಸಾಮಾನ್ಯರಿಗೆ ಹೊರೆಯಾದಂತಾಗಿದೆ. ತುಪ್ಪದ ದರವನ್ನು ಪ್ರತಿ ಕೆಜಿಗೆ 15 ರೂಪಾಯಿ ಹೆಚ್ಚಳ ಮಾಡಲಾಗಿದೆ. ಬೆಣ್ಣೆಯ ಬೆಲೆಯನ್ನು ಪ್ರತಿ ಕೆಜಿಗೆ 50 ರೂ. ಏರಿಕೆ ಮಾಡಲಾಗಿದೆ. ಈ ದರ ಪರಿಷ್ಕರಣೆಯು ರಾಜ್ಯಾದ್ಯಂತ ಇರುವ ಎಲ್ಲಾ ಕೆಎಂಎಫ್ ಮಳಿಗೆಗಳಲ್ಲಿ ಇಂದಿನಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ ಎಂದು ಕೆ ಎಂಎಫ್ ಒಕ್ಕೂಟದ ಬಮೂಲ್ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *