August 16, 2026

ಮೈಸೂರಿನ ಗೋಂಧಳಿ ಸಮಾಜದಿಂದ ವಿಜೃಂಭಣೆಯಿಂದ ಜರುಗಿದ೧೪೫ನೇ ಶ್ರೀ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ

0

ಮೈಸೂರು : ನಗರದ ಪುಲಕೇಶಿ ರಸ್ತೆಯಲ್ಲಿರುವ ಶಿವಾಜಿನಗರ ಬಡಾವಣೆಯ ಗೋಂಧಳಿ ಸಮಾಜದವರಿಂದ ೧೪೫ನೇ ಶ್ರೀ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.ಶಿವಾಜಿನಗರದ ರಾಮಮಂದಿರದ ಮುಂಭಾಗದಿಂದ ಹೊರಟ ಶ್ರೀ ಚಾಮುಂಡೇಶ್ವರಿ ಅಮ್ಮನವರ ಮೆರವಣಿಗೆಯು ಅಶೋಕ ರಸ್ತೆ, ಫೌಂಟನ್ ಸರ್ಕಲ್‌ನಿಂದ ದಂಡಿ ಮಾರಮ್ಮನ ದೇವಾಲಯದವರೆಗೂ ವೈಭವದಿಂದ ಸಾಗಿತು. ಮೆರವಣಿಯಲ್ಲಿ ಡೋಲು, ವಾದ್ಯ, ವಿವಿಧ ಕಲಾತಂಡಗಳು ಭಾಗವಹಿಸಿ ಮೆರವಣಿಗೆಯನ್ನು ಮತ್ತಷ್ಟು ವೈಭವೀಕರಿಸಿದವು.ಮೆರವಣಿಗೆಯುದ್ದಕ್ಕೂ ಭಕ್ತರು ಶ್ರೀ ಚಾಮುಂಡೇಶ್ವರಿಗೆಜೈಕಾರ ಹಾಕಿದರು, ಜತೆಗೆ ದಾರಿಯುದ್ದಕ್ಕೂ ಈಡುಗಾಯಿ ಹೊಡೆದು ತಮ್ಮ ಹರಕೆಗಳನ್ನು ತೀರಿಸಿದರು.ನಂತರ ದಂಡಿ ಮಾರಮ್ಮನ ದೇವಾಲಯದಿಂದ ವಾಹನದ ಮೂಲಕ ಪಶ್ಚಿಮವಾಹಿನಿಯ ಕಾವೇರಿ ನದಿಯಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ವಿಗ್ರಹವನ್ನು ವಿಸರ್ಜನೆ ಮಾಡಲಾಯಿತು. ಈ ಸಂದರ್ಭದಲ್ಲಿ ಗೋಂದಳಿ ಸಮುದಾಯದ ಮುಖಂಡರು, ಗಣ್ಯರು ಭಾಗವಹಿಸಿದ್ದರು.ಜುಲೈ ೨೦ರ ಸೋಮವಾರ ಬೆಳಗ್ಗೆ ತಿಲಕನಗರದರಾಮಮಂದಿರದಿAದ, ಪುಲಕೇಶಿ ರಸ್ತೆ ಮೂಲಕ ಮೆರವಣಿಗೆಯೊಂದಿಗೆ ಶ್ರೀ ತಾಯಿ ಚಾಮುಂಡೇಶ್ವರಿ ಅಮ್ಮನವರನ್ನು ಬರಮಾಡಿಕೊಂಡು ಪ್ರತಿಷ್ಠಾಪಿಸಿ ಪೂಜಾ ಕೈಂಕಾರ್ಯಗಳನ್ನು ನಡೆಸಲಾಗಿತ್ತು.ಬುಧವಾರ ಬೆಳಗ್ಗೆ ಮೆರವಣಿಗೆಗೂ ಮುನ್ನ ಉತ್ಸವಕ್ಕೆ ಆಗಮಿಸಿದ್ದ ಸಮುದಾಯದ ಗಣ್ಯರು ಮತ್ತು ಅತಿಥಿಗಳನ್ನು ಸಮಿತಿಯವರು ಆತ್ಮೀಯವಾಗಿ ಸನ್ಮಾನಿಸಿದರು.ಬೆಳಗ್ಗೆ ೧೧.೦೦ ಗಂಟೆಗೆ ಮಹಾ ಮಂಗಳಾರತಿ ಬಳಿಕ ಪುಲಕೇಶಿ ರಸ್ತೆಯಿಂದ ದಂಡಿನ ಮಾರಮ್ಮ ದೇವಸ್ಥಾನದವರೆಗೆ ವಿಜೃಂಭಣೆಯಿAದ ರಾಜ ಬೀದಿಯಲ್ಲಿ ಮೆರವಣಿಗೆ ನಡೆಯಿತು. ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿ ಧನ್ಯತೆ ಮೆರೆದರು.ಮೆರವಣಿಗೆ ಬಳಿಕ ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಶ್ರೀಮತಿ ಶಾಂತಬಾಯಿ ಮತ್ತು ದಿ. ಶ್ರೀ ಕೆ. ನಾರಾಯಣ್‌ರಾವ್ ವಾಕೋಡೆ, ಶ್ರೀಮತಿ ಸರಿತಬಾಯಿ ಮತ್ತು ಶ್ರೀ ಎನ್. ಶ್ರೀಧರ್‌ರಾವ್ ವಾಕೋಡೆ ಇವರ ಕುಟುಂಬದವರಿAದ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಿಲಾಗಿತ್ತು.ಕಾರ್ಯಕ್ರದಲ್ಲಿ ಶಾಸಕರಾದ ಕೆ.ಹರೀಶ್‌ಗೌಡ, ಪಿ.ಸ್ವರೂಪ್ ಪ್ರಕಾಶ್, ಮಾಜಿ ಶಾಸಕರಾದ ಆರ್.ನಾಗೇಂದ್ರ, ಮಾಜಿ ಸಂಸದರಾದ ಪ್ರತಾಪ್ ಸಿಂಹ, ಮಾಜಿ ಕಾರ್ಪೋರೇಟರ್ ಆರ್.ಸ್ವಾಮಿ, ಎನ್‌ಆರ್ ಠಾಣೆಯ ಇನ್ಸ್ಪೆಕ್ಟರ್ ಪಿ.ಕೆ. ರಾಜು, ಮುಂತಾದ ಗಣ್ಯರು ಭಾಗವಹಿಸಿದ್ದರು.ಜತೆಗೆ ಗೋಂಧಳಿ ಸಮಾಜದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳಾದ ಎನ್.ಶ್ರೀಧರ್‌ರಾವ್ ವಾಕೋಡೆ, ಆರ್.ಗಿರೀಶ್‌ರಾವ್ ಇಗ್ವೆ, ವಿ.ಆನಂದ್‌ರಾವ್ ವಾಕೋಡೆ, ಎಸ್.ಲೋಕೇಶ್‌ರಾವ್ ವಾಕೋಡೆ, ಕೆ.ನಾರಾಯಣರಾವ್ ಭಾಗವಂತ್, ರಾಚಪ್ಪ, ದೇವೋಜಿರಾವ್ ಇತರೆ ಪದಾಧಿಕಾರಿಗಳು ಮೊಹಲ್ಲಾದ ಮುಖಂಡರಾದ ಈಶ್ವರ್, ರವಿಕುಮಾರ್, ಸಿದ್ದಪ್ಪಾಜಿ, ಸುನೀಲ್, ಅರವಿಂದ್, ಸಂತೋಷ್ ಇತರರು ಇದ್ದರು.

Leave a Reply

Your email address will not be published. Required fields are marked *