August 31, 2026

ಮೃತ ಭಿಕ್ಷುಕಿ ಮನೆಯಲ್ಲಿ 8 ಲಕ್ಷಕ್ಕೂ ಅಧಿಕ ಹಣ ಪತ್ತೆ: ಇನ್ನೂ 20 ಮೂಟೆ ಪರಿಶೀಲನೆ ಬಾಕಿ!

0

ಮಂಡ್ಯ: ನಗರದ ಗುತ್ತಲು ಬಡಾವಣೆಯಲ್ಲಿದ್ದ ಭಿಕ್ಷುಕಿ ನೂರ್ ಉನ್ನೀಸಾ ವಯೋಸಹಜ ಕಾಯಿಲೆಯಿಂದ ಶನಿವಾರ ಮೃತಪಟ್ಟಿದ್ದು, ಅವರ ಮನೆಯಲ್ಲಿ ₹8 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ.ಮನೆಯವರು ನೋಡಿಕೊಳ್ಳುತ್ತಿಲ್ಲ ಎಂದು ವೃದ್ಧೆ ನೂರ್ ಉನ್ನೀಸ ಅವರು ಹಲವು ವರ್ಷಗಳಿಂದ ಭಿಕ್ಷಾಟನೆ ಮಾಡುತ್ತಿದ್ದರು. ಅಂತ್ಯಕ್ರಿಯೆ ಮುಗಿದ ಬಳಿಕ ಸಂಬಂಧಿಕರು ಭಿಕ್ಷುಕಿ ವಾಸಿಸುತ್ತಿದ್ದ ಮನೆಗೆ ಹೋಗಿ ನೋಡಿದಾಗ ಚೀಲಗಟ್ಟಲೆ ನಾಣ್ಯಗಳು ಮತ್ತು ಕಂತೆ ಕಂತೆ ನೋಟುಗಳು ಸಿಕ್ಕಿವೆ. ಭಿಕ್ಷಾಟನೆಯಿಂದಲೇ ಲಕ್ಷಾಂತರ ರೂಪಾಯಿ ಕೂಡಿಟ್ಟಿದ್ದರು. ಹತ್ತಾರು ಮಂದಿ ಕುಳಿತು ನಾಣ್ಯ ಮತ್ತು ನೋಟುಗಳನ್ನು ಎರಡು ದಿನ ಎಣಿಕೆ ಮಾಡಿದ್ದಾರೆ. ನಂತರ ಸಂಬಂಧಿಕರಿಗೆ ಆ ಹಣವನ್ನು ಹಸ್ತಾಂತರ ಮಾಡಲಾಗಿದೆ.ಇನ್ನೂ ಭಿಕ್ಷಾಟನೆ ಮಾಡುತ್ತಿದ್ದ ವೃದ್ಧೆ ಮನೆಯಲ್ಲಿ ಲಕ್ಷಾಂತರ ರೂ. ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೃದ್ದೆ ನೂರ್ ಉನ್ನೀಸಾ ಮನೆಯಲ್ಲಿ ಇದ್ದದ್ದು 8 ಲಕ್ಷ ಅಷ್ಟೇ ಅಲ್ಲ. 30 ಲಕ್ಷಕ್ಕೂ ಅಧಿಕ ರೂಪಾಯಿ ಹಣ ಕೂಡಿಟ್ಟಿರುವ ಮಾಹಿತಿ ಸಿಕ್ಕಿದೆ. ಸಹೋದರಿ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಬ್ಬರು ಸಹೋದರಿಯರು ಮದುವೆ ಆಗಿರಲಿಲ್ಲ. ಎರಡು ವರ್ಷದ ಹಿಂದೆ ನೂರ್ ಉನ್ನೀಸಾ ಅಕ್ಕ‌ ನಿಧನವಾಗಿದ್ದರು. ಬಳಿಕ ಮನೆಯಲ್ಲಿ ನೂರ್ ಉನ್ನೀಸಾ ಒಂಟಿಯಾಗಿ ವಾಸಿಸುತ್ತಿದ್ದರು.

Leave a Reply

Your email address will not be published. Required fields are marked *