August 31, 2026

ಟಾಕ್ಸಿಕ್​​ ಟಿಕೆಟ್​ಗೆ ಭಾರಿ ಡಿಮ್ಯಾಂಡ್​​: ಅಡ್ವಾನ್ಸ್​ ಬುಕಿಂಗ್​ ಓಪನ್​; ಕರ್ನಾಟಕವೊಂದರಲ್ಲೇ…!

0

ಸ್ಯಾಂಡಲ್​ವುಡ್​ ರಾಕಿಂಗ್​ ಸ್ಟಾರ್​ ಯಶ್ ನಾಲ್ಕುವರೆ ವರ್ಷಗಳ ಬಳಿಕ ಬಿಗ್​ ಸ್ಕ್ರೀನ್​​ನಲ್ಲಿ ಕಾಣಿಸಿಕೊಳ್ಳುತ್ತಿರುವ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ನ ಅಡ್ವಾನ್ಸ್​ ಟಿಕೆಟ್ ಬುಕಿಂಗ್ ಇಂದು ಭಾರತದಲ್ಲಿ ಅಧಿಕೃತವಾಗಿ ಆರಂಭ ಕಂಡಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಆರಂಭಿಕ ಪ್ರತಿಕ್ರಿಯೆಯು, ವಿಶೇಷವಾಗಿ ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಸೂಚಿಸಿದೆ. ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಚಿತ್ರದ ಕ್ರೇಜ್​ ಈಗ ಅಂಕಿಅಂಶಗಳಲ್ಲಿ ಸಾಬೀತಾಗುತ್ತಿದೆ.

ಹೌದು, ಕೆಲವೇ ಗಂಟೆಗಳಲ್ಲಿ, ಬಹುನಿರೀಕ್ಷಿತ ಚಿತ್ರವು ಬುಕ್‌ ಮೈ ಶೋನಲ್ಲಿ 100,000ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡುವ ಮೂಲಕ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ. ಮೊದಲ ಗಂಟೆಯಲ್ಲಿ ಸರಿ-ಸುಮಾರು 3,050 ಟಿಕೆಟ್‌ಗಳಿಂದ ಪ್ರಾರಂಭವಾಗಿ, ಬೆಳಗ್ಗೆ 10 ರಿಂದ 11ರ ನಡುವೆ ಗರಿಷ್ಠ ಮಟ್ಟವನ್ನು ತಲುಪಿತು. 60 ನಿಮಿಷಗಳಲ್ಲಿ ಸುಮಾರು 27,000 ಟಿಕೆಟ್‌ಗಳು ಮಾರಾಟವಾದವು.

Leave a Reply

Your email address will not be published. Required fields are marked *